ಪತ್ರಿಕೆ

ಮುದ್ರಣ ಮಾಧ್ಯಮವು ಮನುಷ್ಯ ಸುಲಭವಾದ ಕಾಲದಲ್ಲೇ ಆಯಾ ಭಾಷೆಗಳಲ್ಲಿ  ಸಾಹಿತ್ಯಿಕ ಪತ್ರಿಕೆಗಳು ಶುರುವಾದುವು. ಕನ್ನಡದಲ್ಲಿ ಸಾಹಿತ್ಯಿಕ ಪತ್ರಿಕೆಗಳ ದೀರ್ಘ ಇತಿಹಾಸವೇ ಇದೆ. ಆದರೆ ಡಿಜಿಟಲ್ ಮಾಧ್ಯಮವು ಮುನ್ನೆಲೆಗೆ ಬರಲು ತೊಡಗಿದಂತೆ ಮುದ್ರಣ ಮಾಧ್ಯಮದಲ್ಲಿದ್ದ  ಸಾಹಿತ್ಯಿಕ ಪತ್ರಿಕೆಗಳು ತಮ್ಮದೇ ಆದ ಅಬೇರೆ ಬೇರೆ ಕಾರಣಗಳಿಗೆ ನಿಂತುಹೋಗ ತೊಡಗಿದವು. ಹಾಗಿದ್ದಾಗ ಅಂತರ್ಜಾಲ ತಾಣಗಳಲ್ಲಿ ಪರಸ್ಪರ ಪರಿಚಯವಾಗಿದ್ದ ಗೆಳೆಯ, ಹಿರಿಯ ನೆರವಿನಿಂದ ರಾಜೇಂದ್ರ ಪ್ರಸಾದ್ ೨೦೧೫ ರ ಮೇ 17 ರಂದು ಸಂಕಥನ ಪತ್ರಿಕೆಯ ಮೊದಲ ಸಂಚಿಕೆ ಹೊರತಂದರು. ಅದಾದ ಮೇಲೆ ಕಾಲವ್ಯತ್ಯಯದಲ್ಲಿ ಒಟ್ಟು 8 ಸಂಚಿಕೆಗಳು ಮಾತ್ರ ಪ್ರಕಟವಾದುವು. ಅರ್ಥಿಕ ಅಡಚಣೆ, ನಿರ್ವಹಣೆ ಇತ್ಯಾದಿಗಳ ಕಾರಣದಿಂದ ೨೦೧೭ ಕ್ಕೆಲ್ಲ ಪತ್ರಿಕೆ ಪ್ರಸರಣ ನಿಂತಿತು.

ಮತ್ತೆ ಮುಂದುವರೆಸಲು ಯೋಜನೆ ಸಿದ್ದಪಡಿಸಿದಾಗೆಲ್ಲಾ ಹಳೆಯ ನಷ್ಟವೇ ಬೃಹದಾಕಾರವಾಗಿ ನಿಂತು ಅಣಕಿಸುತ್ತಿತ್ತು. ಅದೇ ವೇಳೆಗೆ ಆಗೊಂದು ಈಗೊಂದು ಪುಸ್ತಕ ಪ್ರಕಟಿಸುತ್ತಿದ್ದ ನಾವು ಸರಣಿಯಲ್ಲಿ ಪುಸ್ತಕಗಳನ್ನು ಪ್ರಕಟಿಸ ತೊಡಗಿದೆವು. ಪ್ರಕಾಶನವು ಸ್ವಲ್ಪ ಮಟ್ಟಿಗೆ ಯಶಸ್ವಿಯಾಯಿತು. ಅದನ್ನು ಮುಂದುವರಿಸುತ್ತಾ ಬಂದೆವು. ಆದರೆ ಪತ್ರಿಕೆಯನ್ನು ತರುವ ಕುರಿತಾಗಿ ಲೆಕ್ಕಾಚಾರಗಳು, ಯೋಜನೆಗಳು ಇದುವರೆಗೂ ಮುಂದಕ್ಕೆ ಹೋಗುತ್ತಲೇ ಬಂದಿವೆ. ೨೦೨೦ ರ ಮಧ್ಯ  ಭಾಗದಲ್ಲಿ  ಸಂಕಥನ ಸಾಹಿತ್ಯ ಪತ್ರಿಕೆಯನ್ನು ಉಳಿಸಿರುವ ಬಾಕಿ ಸಂಚಿಕೆಗಳ ಸಮೇತ e- ಸಂಚಿಕೆಗಳಾಗಿ ರೂಪಿಸುವ ಕೆಲಸಕ್ಕೆ ಕೈ ಹಾಕಿದೆವು. ಬರೋಬ್ಬರಿ 20 ಸಂಚಿಕೆಗಳ ಕೆಲಸ!! ಇವುಗಳನು  ಸಾಧ್ಯವಾದಷ್ಟು ಬೇಡಿಕೆಯ ಮೇರೆಗೆ ಮುದ್ರಿಸಿಕೊದುವಂತೆ ರೂಪಿಸಲಾಗುತ್ತಿದೆ. ಹಳೆಯ ಸಂಚಿಕೆಗಳು ಈಗಾಗಲೇ ಇಲ್ಲಿ ಲಭ್ಯವಿವೆ. ಹೊಸ ಸಂಚಿಕೆಗಳು ಸಿದ್ದವಾದಂತೆಲ್ಲಾ ನಮ್ಮ ವೆಬ್ ಸೈಟಿನ ಕಪಾಟಿಗೆ ಸೇರಲಿವೆ.  

2015 - 2016

4 ಸಂಚಿಕೆಗಳು

2016 - 2017

4 ಸಂಚಿಕೆಗಳು

2017 - 2018

4 ಸಂಚಿಕೆಗಳು

2018 - 2019

4 ಸಂಚಿಕೆಗಳು

2019 - 2020

4 ಸಂಚಿಕೆಗಳು

2020 - 2021

4 ಸಂಚಿಕೆಗಳು